ಕನ್ನಡ ಚಿತ್ರರಂಗದಲ್ಲಿ ಭಾರಿ ಕುತೂಹಲ ಹುಟ್ಟಿಸಿರುವ ಚಿತ್ರ ’ಗಾಡ್ ಫಾಧರ್’ ಮುಂದಿನ ವಾರ ಮೊದಲ ಪ್ರತಿ ಪಡೆದು ಕೊಂಡು ಜುಲೈ ೨೭ ರಂದು ಬಿಡುಗಡೆ ಎಂದು ಯೋಚಿಸುತ್ತಿದ್ದಾರೆ ನಿರ್ಮಾಪಕ ಕೆ ಮಂಜು ಅವರು.
ಈಗಾಗಲೇ ಅತ್ಯಂತ ಪ್ರಮುಖ ಸಂಗೀತ ನಿರ್ದೇಶಕ ಎಂದು ವಿಶ್ವ ಮಟ್ಟದಲ್ಲಿ ಹೇಳಲಾಗುವ ಎ ಆರ್ ರೆಹಮಾನ್ ಅವರ ಹಾಡುಗಳು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಅಮ್ಮ.... ಹಾಡು ಕೇಳುಗರಲ್ಲಿ ವಿಶೇಷ ಸ್ಥಾನ ಆಕ್ರಮಿಸಿದೆ. ಇಂತಿಪ್ಪ ಅನೇಕ ಹೊಸ ಅನುಭಾವ ’ಗಾಡ್ ಫಾಧರ್’ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ.
ಹೆಸರಾಂತ ನಿರ್ಮಾಪಕ ಕೆ.ಮಂಜು ಹಲವಾರು ಹೊಸ ಸಂಗತಿಗಳೊಂದಿಗೆ ಸಿದ್ಧವಾಗುತ್ತಿರುವ ’ಗಾಡ್ ಫಾದರ್’ ಚಿತ್ರ ಕಲಾ ನಿರ್ದೇಶಕ ಇಸ್ಮಾಯಿಲ್ ಜೊತೆಗೆ ವಾಸುದೇವ್ ಹಾಗೂ ನರಸಿಂಹ ಅದ್ಬುತ ಮನೆಯ ವಿನ್ಯಾಸವನ್ನು ಮಾಡಿದರೆ ಚೆನೈನಿಂದ ಮೇಸ್ತ್ರಿ ಶಂಕರ್ ತಂಡವು ಈ ಮನೆಯ ನಿರ್ಮಾಣಕ್ಕೆ ಕೆಲಸ ಮಾಡಿದೆ.
ಈ ಚಿತ್ರದ ಮುಖಾಂತರ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಆಗಮನವಾಗಿದೆ. ಸದ್ಯದಲ್ಲೇ ಅವರು ೬ ಹಾಡುಗಳ ಸಂಯೋಜನೆಯನ್ನು ಮಾಡಿರುವರು.
ಸೂಪರ್ ಸ್ಟಾರ್ ಉಪೇಂದ್ರ ದ್ವಿತೀಯ ಬಾರಿ ತ್ರಿಪಾತ್ರಗಳನ್ನು ಮಾಡುತ್ತಿರುವ ಬಹು ಕೋಟಿ ವೆಚ್ಚದ ಚಿತ್ರಕ್ಕೆ ಉಪೇಂದ್ರ ಅವರೇ ಸಂಭಾಷಣೆ ಬರೆದಿದ್ದಾರೆ.
ರಾಷ್ಟ್ರಖ್ಯಾತಿ ಛಾಯಾಗ್ರಾಹಕ ಶ್ರೀರಾಮ್ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಡಾ. ಜಯಮಾಲ ಪುತ್ರಿ ಸೌಂದರ್ಯ ಮೊದಲ ಬಾರಿಗೆ ನಾಯಕಿಯಾಗುತ್ತಿದ್ದಾg ಕ್ಯಾತೆರೆನೆ , ಭೂಮಿಕಾ ಚಾವ್ಲ . ರಮೇಶ್ ಭಟ್, ರವೀಂದ್ರ ಹಾಗೂ ಇನ್ನು ಅನೇಕರು ತಾರಾಗಣದಲ್ಲಿದ್ದಾರೆ.